Technology
6ಜಿ ತಂತ್ರಜ್ಞಾನ ಅಭಿವೃದ್ಧಿ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

6ಜಿ ತಂತ್ರಜ್ಞಾನ ಅಭಿವೃದ್ಧಿ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

tv9kannada1h
THE BRIEF
1

ಮುಂದಿನ ಪೀಳಿಗೆಯ 6ಜಿ ವೈರ್‌ಲೆಸ್ ನೆಟ್‌ವರ್ಕ್ ಅಭಿವೃದ್ಧಿಗಾಗಿ ಅಮೆರಿಕ ನೇತೃತ್ವದಲ್ಲಿ ರಚಿಸಲಾದ 25 ದೇಶಗಳ ಜಾಗತಿಕ ಮೈತ್ರಿಕೂಟಕ್ಕೆ ಭಾರತ ಅಧಿಕೃತವಾಗಿ ಸೇರ್ಪಡೆಯಾಗಿದೆ.

2

ಈ ಮೈತ್ರಿಯು ಸೈಬರ್ ಭದ್ರತೆ, ದತ್ತಾಂಶ ರಕ್ಷಣೆ ಮತ್ತು ವಿಶ್ವಸನೀಯ ಎಐ ನಿಯಮಗಳನ್ನು ಅಳವಡಿಸಿಕೊಳ್ಳುವ ಗುರಿ ಹೊಂದಿದ್ದು, ಭಾರತೀಯ ಸ್ಟಾರ್ಟಪ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಪೇಟೆಂಟ್ ಮತ್ತು ತಾಂತ್ರಿಕ ವಿನ್ಯಾಸದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಿದೆ.

3

6ಜಿ ತಂತ್ರಜ್ಞಾನವು 5ಜಿ ಗಿಂತ ಸುಮಾರು 100 ಪಟ್ಟು ಹೆಚ್ಚು ವೇಗವನ್ನು ಹೊಂದಿರಲಿದ್ದು, ಸೆಕೆಂಡಿಗೆ ಟೆರಾಬಿಟ್ ವೇಗದ ಡೇಟಾ ಪ್ರಸರಣ ಮತ್ತು ರಿಯಲ್-ಟೈಮ್ ಹೋಲೋಗ್ರಾಫಿಕ್ ಸಂವಹನಕ್ಕೆ ಬಲ ತುಂಬಲಿದೆ.