
ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿಯ ವೇಳೆ 450 ಕೆಜಿ ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದೆ.
ಅಂಬಾರಿ ಹೊತ್ತಿದ್ದ ಆನೆ ಅಡ್ಡಾದಿಡ್ಡಿಯಾಗಿ ಓಡಿದ ಪರಿಣಾಮ ಕಾರುಗಳು ಜಖಂ ಆಗಿದ್ದು, ಅಂಬಾರಿಗೂ ಸಣ್ಣ ಹಾನಿಯಾಗಿದೆ.
ಕೊನೆಯ ಕ್ಷಣದಲ್ಲಿ ತರಬೇತಿ ನೀಡಿದ್ದ ಸೋಮಣ್ಣ ಆನೆಗೆ ಸರಿಯಾಗಿ ತಾಲೀಮು ಸಿಗದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.