
ಬಾಂಗ್ಲಾದೇಶದ ಪಾರ್ಲಿಮೆಂಟ್‌ನಲ್ಲಿ ನಡೆದ ಚುನಾವಣೆಯಲ್ಲಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಅವರು 255 ಮತಗಳನ್ನು ಪಡೆಯುವ ಮೂಲಕ ದೇಶದ 23ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 349 ಅರ್ಹ ಸಂಸದರ ಪೈಕಿ 343 ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದು, ಎದುರಾಳಿ ಒಲಿ ಅಹ್ಮದ್ ಅವರು ಕೇವಲ 88 ಮತಗಳನ್ನು ಗಳಿಸಿ ಸೋಲನ್ನು ಅನುಭವಿಸಿದ್ದಾರೆ.
ಕಳೆದ 22ನೇ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಆರೋಗ್ಯ ಸಮಸ್ಯೆಯಿಂದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಸಂವಿಧಾನದ ನಿಯಮದಂತೆ 90 ದಿನಗಳ ಒಳಗೆ ಈ ಚುನಾವಣೆ ನಡೆಸಲಾಗಿದೆ.