
ಅಂಬಾನಿ ಮನೆಯ ಗಣಪತಿ ಪೂಜೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ದೇಹದ ತೂಕ ಹೆರಿಗೆಯ ಬಳಿಕ ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಕೆಲವರು ನಟಿಯ ತೂಕದ ಬಗ್ಗೆ ನೆಗೆಟಿವ್ ಆಗಿ ಟ್ರೋಲ್ ಮಾಡಿದ್ದನ್ನು ಅಭಿಮಾನಿಗಳು ಖಂಡಿಸಿದ್ದು, ಈ ಕುರಿತ ಇನ್ಸ್ಟಾಗ್ರಾಮ್ ಪೋಸ್ಟ್ಗೆ ನಟ ಹೃತಿಕ್ ರೋಷನ್ ಲೈಕ್ ಮಾಡಿದ್ದಾರೆ.
ಹೃತಿಕ್ ರೋಷನ್ ಅವರು ಪೋಸ್ಟ್ಗೆ ಲೈಕ್ ಒತ್ತುವ ಮೂಲಕ ಕತ್ರಿನಾ ಪರವಾಗಿ ತಾವು ನಿಂತಿರುವುದನ್ನು ಸಾಬೀತುಪಡಿಸಿದ್ದು, ಹೆರಿಗೆಯ ನಂತರದ ಬದಲಾವಣೆಗಳು ಸಹಜವಾಗಿವೆ.