
ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಪಂಚಾಯ್ತಿ ನಡೆಸಿ ಗಗನ್ ಹಾಗೂ ತಾಂಡವ್ ಸೇರಿದಂತೆ ಹಲವು ಸ್ಪರ್ಧಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಜಗ್ಗು ಮಮ್ಮಿ ಅವರನ್ನು 'ಹೋಗೆ-ಬಾರೆ' ಎಂದು ಕರೆಯುವುದು ಹಾಗೂ ಆಳಿನ ರೀತಿ ಬಳಸಿಕೊಳ್ಳುವುದನ್ನು ತರಾಟೆಗೆ ತೆಗೆದುಕೊಂಡ ಸುದೀಪ್, ತಾಂಡವ್ ಕೈಯಿಂದಲೇ ಜಗ್ಗುಗೆ ಕ್ಷಮೆ ಸಹ ಕೇಳಿಸಿದ್ದಾರೆ.
ನಾಮಿನೇಷನ್ ಚರ್ಚೆ ಮಾಡುವುದು ಹಾಗೂ ಗುಟ್ಟಾಗಿ ಮಾತನಾಡುವಂತಿಲ್ಲ ಎಂಬ ನಿಯಮಗಳನ್ನು ಮುರಿದಿರುವ ಗಗನ್ ಮತ್ತು ತಾಂಡವ್ಗೆ, ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಹೊರಹಾಕುವುದಾಗಿ ಎಚ್ಚರಿಸಿದ್ದಾರೆ.