
ನಿಷೇಧಿತ ಆನ್ಲೈನ್ ಜೂಜು ನಡೆಸಿ ಅಕ್ರಮ ಎಸಗಿದ ಪ್ರಕರಣದಲ್ಲಿ ಗೇಮ್ಸ್ಕ್ರಾಫ್ಟ್ ಟೆಕ್ನಾಲಜೀಸ್ ಲಿಮಿಟೆಡ್ನ ₹442.35 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ.
ಈ ಮುಟ್ಟುಗೋಲಿನೊಂದಿಗೆ ಈ ಪ್ರಕರಣದಲ್ಲಿ ಒಟ್ಟು ₹2,843 ಕೋಟಿ ಮೌಲ್ಯದ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಂತಾಗಿದೆ.
ರಮ್ಮಿಕಲ್ಚರ್ ಮತ್ತು ರಮ್ಮಿಟೈಮ್ ಸೇರಿದಂತೆ ವಿವಿಧ ಆ್ಯಪ್ಗಳ ಮೂಲಕ ಜೂಜಾಟ ನಡೆಸಿ, ಚಂದಾದಾರರ ಒಪ್ಪಿಗೆಯಿಲ್ಲದೆ ಎಐ ಬಾಟ್ಗಳನ್ನು ಬಳಸಿ ವಂಚಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.