
ಸರ್ಕಾರ ಮತ್ತು ರಾಜ್ಯಪಾಲರ ಅನುಮತಿ ಪಡೆಯದೆ 2018-19ನೇ ಸಾಲಿನಲ್ಲಿ ಆರಂಭಿಸಿದ್ದ 8 ಸ್ನಾತಕೋತ್ತರ ಕೋರ್ಸ್ಗಳನ್ನು ತಕ್ಷಣವೇ ನಿಲ್ಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಹಾವೇರಿ ಜಾನಪದ ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.
ಈ ನಿರ್ಧಾರದಿಂದಾಗಿ ಎಂ.ಎ ಅರ್ಥಶಾಸ್ತ್ರ, ಕನ್ನಡ, ಇಂಗ್ಲಿಷ್ ಸೇರಿದಂತೆ 8 ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ 20ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಪ್ರೊ. ಬೋರಲಿಂಗಯ್ಯ ಸಮಿತಿಯ ವರದಿಯಂತೆ, ಜಾನಪದ ವಿವಿಯಲ್ಲಿ ಜಾನಪದ ವಿಷಯಗಳನ್ನೇ ಬೋಧಿಸಬೇಕೆಂದು ಸರ್ಕಾರ ಈ ಕ್ರಮ ಕೈಗೊಂಡಿದ್ದು, ಇದರಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.