
ನಿವಿನ್ ಪೌಳಿ ಹಾಗೂ ಮಮಿತಾ ಬೈಜು ನಟಿಸಿ ಚಿತ್ರಮಂದಿರಗಳಲ್ಲಿ ಪ್ರಚಂಡ ಯಶಸ್ಸು ಕಂಡ ಮಲಯಾಳಂ ಚಿತ್ರರಂಗದ ದಾಖಲೆಯ 'ಬೆತ್ಲಹೆಮ್ ಕುಟುಂಬ ಯುನಿಟ್' ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.
ಈ ರೊಮ್ಯಾಂಟಿಕ್ ಕಾಮಿಡಿ ಚಲನಚಿತ್ರವು ಅಕ್ಟೋಬರ್ 2ರಿಂದ ಜಿಯೋ ಹಾಟ್ಸ್‌ಸ್ಟಾರ್‌ನಲ್ಲಿ ಮಲಯಾಳಂ ಜೊತೆಗೆ ಕನ್ನಡ ಭಾಷೆಯಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ.
ಗಿರೀಶ್ ಎಡಿ ನಿರ್ದೇಶನದ ಮತ್ತು ಭಾವನಾ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವು ಮುಂಡಕಾಯಂನಿಂದ ಕರುಕುಟ್ಟಿಗೆ ಸ್ಥಳಾಂತರಗೊಳ್ಳುವ ಅಶ್ಲಿ ಮತ್ತು ನೆರೆಯ ಜಸ್ಟಿನ್ ನಡುವಿನ ಕಥೆಯನ್ನು ಹೊಂದಿದೆ.