International
ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಕರ್ನಾಟಕದ ಐವರು ಸೇರಿ ಆರು ಸಾವು

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಕರ್ನಾಟಕದ ಐವರು ಸೇರಿ ಆರು ಸಾವು

tv9kannada1h
THE BRIEF
1

ಉತ್ತರಾಖಂಡದ ಬದರಿನಾಥ ಧಾಮದಿಂದ ಫಾಟ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಸಮೀಪ ಪತನಗೊಂಡು ಕರ್ನಾಟಕದ ಐವರು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

2

ಹವಾಮಾನ ವೈಪರಿತ್ಯದಿಂದ ಸಂಭವಿಸಿದ ಈ ದುರಂತದಲ್ಲಿ ಸಿಸಿಬಿ ಇನ್ಸ್​ಪೆಕ್ಟರ್ ಅರುಣ್ ಸಾಲಂಕೆ, ಶಂಕರ್ ಗೌಡ, ಕೆ.ಸುಧೀರ್, ಹೆಚ್.ಎಸ್.ನಟರಾಜ್ ಹಾಗೂ ಪ್ರತಾಪ್ ಪ್ರಾಣ ಕಳೆದುಕೊಂಡಿದ್ದಾರೆ.

3

ಮೃತ ಅರುಣ್ ಸಾಲಂಕೆ ಅವರು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದವರಾಗಿದ್ದು, 2007ನೇ ಬ್ಯಾಚ್‌ನ ಅಧಿಕಾರಿಯಾಗಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸಿಸುತ್ತಿದ್ದರು.