
ದೇಶಾದ್ಯಂತ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹರು ಹಾಗೂ ಮೊದಲ ಬಾರಿಗೆ ಮತದಾನಕ್ಕೆ ಅರ್ಹರಾಗಿರುವ ಯುವಕರನ್ನು ಸೇರಿಸಲು ವಿಶೇಷ ಅಭಿಯಾನ ನಡೆಸುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಈಗಾಗಲೇ SIR ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅರ್ಹರು ಹೊರಗುಳಿದಿದ್ದರೆ ಫಾರ್ಮ್-6 ಪಡೆದು ಮತ್ತೆ ಪಟ್ಟಿಗೆ ಸೇರಿಸಲು ಆಯೋಗ ನಿರ್ದೇಶಿಸಿದೆ.
ಮಹಾರಾಷ್ಟ್ರದ ಮುಂಬೈ ಸಿಟಿ ಮತ್ತು ಮುಂಬೈ ಸಬರ್ಬನ್ ಪ್ರದೇಶಗಳಲ್ಲಿ ಯಾವುದೇ ಮತದಾರರ ಹೆಸರನ್ನು ತರಾತುರಿಯಲ್ಲಿ ತೆಗೆದುಹಾಕದಂತೆ ಹಾಗೂ ಸಾಕಷ್ಟು ಅವಕಾಶ ನೀಡಿ ಸೂಕ್ತ ಪರಿಶೀಲನೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಕಚೇರಿ ಸೂಚಿಸಿದೆ.