
ಸೆಪ್ಟೆಂಬರ್ 10ರಂದು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿದ್ದ ಬಹಿರಂಗ ಸಮಾವೇಶಕ್ಕೆ ಶಾಲಾ ಶಿಕ್ಷಣ ಇಲಾಖೆ ಅನುಮತಿ ನಿರಾಕರಿಸಿದೆ.
ಸರ್ಕಾರಿ ನಿಯಮಾವಳಿಗಳ ಪ್ರಕಾರ ಶಾಲಾ ಮೈದಾನವನ್ನು ರಾಜಕೀಯ ಸಮಾರಂಭಗಳಿಗೆ ಬಳಸಲು ಅವಕಾಶವಿಲ್ಲದ ಕಾರಣ, ಅನುಮತಿ ನೀಡಿದರೆ ಪ್ರಾಂಶುಪಾಲರೇ ಹೊಣೆಗಾರರಾಗುತ್ತಾರೆ ಎಂದು ಇಲಾಖೆ ಎಚ್ಚರಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ 170 ಕಿ.ಮೀ ಉದ್ದದ 'ಬಳ್ಳಾರಿ ಚಲೋ' ಪಾದಯಾತ್ರೆ ಇದೀಗ ಅಂತಿಮ ಘಟ್ಟದಲ್ಲಿದ್ದು, ಸಮಾರೋಪ ಸಮಾವೇಶಕ್ಕಾಗಿ ಪರ್ಯಾಯ ಸ್ಥಳ ಹುಡುಕಬೇಕಿದೆ.