
ಉತ್ತರಾಖಂಡದ ಪ್ರವಾಸಕ್ಕೆ ತೆರಳಿದ್ದ ವೇಳೆ ಹವಾಮಾನ ವೈಪರೀತ್ಯದಿಂದ ಬದರಿನಾಥ ವ್ಯಾಪ್ತಿಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಅರುಣ ಸಾಳುಂಕೆ ಸೇರಿದಂತೆ ಐವರು ಕನ್ನಡಿಗರು ಮತ್ತು ಪೈಲಟ್ ಮೃತಪಟ್ಟಿದ್ದಾರೆ.
ಚಮೋಲಿ ಜಿಲ್ಲೆಯ ಬದರಿನಾಥದಿಂದ ಡೆಹ್ರಾಡೂನ್‌ಗೆ ವಾಪಸ್ ಆಗುವಾಗ ಶುಕ್ರವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಜೆಪಿ ಪವರ್ ಹೌಸ್ ಬಳಿ ಹೆಲಿಕಾಪ್ಟರ್ ಗುಡ್ಡದ ಬದಿಗೆ ಅಪ್ಪಳಿಸಿದೆ.
ಸೇನೆ, ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ಪೊಲೀಸರು ಸುಟ್ಟು ಕರಕಲಾದ ಮೃತದೇಹಗಳನ್ನು ಪತ್ತೆ ಹಚ್ಚಿ ಜೋಶಿಮಠ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕರ್ನಾಟಕಕ್ಕೆ ತರಲಾಗುತ್ತದೆ.