Health & Environment
ಗುಜರಾತ್‌ನಲ್ಲಿ ಚಂಡೀಪುರ ಸೋಂಕು: 22 ಮಕ್ಕಳ ಸಾವು

ಗುಜರಾತ್‌ನಲ್ಲಿ ಚಂಡೀಪುರ ಸೋಂಕು: 22 ಮಕ್ಕಳ ಸಾವು

prajavani1h
THE BRIEF
1

ಗುಜರಾತ್‌ನಲ್ಲಿ ಈ ಮುಂಗಾರು ಅವಧಿಯಲ್ಲಿ ಚಂಡೀಪುರ ಸೋಂಕಿನಿಂದಾಗಿ ಒಟ್ಟು 22 ಮಕ್ಕಳು ಮೃತಪಟ್ಟಿದ್ದು, ಪ್ರಸ್ತುತ ಏಳು ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2

ಸೋಮವಾರದವರೆಗೆ ರಾಜ್ಯದಲ್ಲಿ 184 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 35 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

3

ಸ್ಯಾಂಡ್‌ಫ್ಲೈ ಕಡಿತದಿಂದ ಹರಡುವ ಈ ಸೋಂಕಿಗೆ ನಿರ್ದಿಷ್ಟ ಔಷಧವಿಲ್ಲದ ಕಾರಣ, ಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.