
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ದಿಂಡವಾರ ಗ್ರಾಮದಲ್ಲಿ ತೊಗರಿ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಶಿವಶಂಕರ ಜೀರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಹೊಲದಿಂದ ವಶಪಡಿಸಿಕೊಂಡ 500ಕ್ಕೂ ಅಧಿಕ ಗಾಂಜಾ ಗಿಡಗಳ ತೂಕ 202 ಕೆ.ಜಿ. 755 ಗ್ರಾಂ ಇದ್ದು, ಇದರ ಮೌಲ್ಯ ₹1.1 ಕೋಟಿಯಾಗಿದೆ.
ವಿಶೇಷ ಕಾರ್ಯಾಚರಣೆಗಳ ಮೂಲಕ 2026ನೇ ಸಾಲಿನಲ್ಲಿ ಇದುವರೆಗೆ 57 ಪ್ರಕರಣ ದಾಖಲಿಸಿ 65 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.