
ಶ್ರೀಲಂಕಾದ ನೆಡುಂತೀವು ದ್ವೀಪದ ಸಮೀಪ ಪಾಕ್ ಜಲಸಂಧಿಯಲ್ಲಿ ಅಪಘಾತಕ್ಕೀಡಾದ ಬೋಟ್‌ನಲ್ಲಿದ್ದ 11 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಗುರುವಾರ ರಕ್ಷಿಸಿದೆ.
ಮೀನುಗಾರರು ಅಂತರರಾಷ್ಟ್ರೀಯ ಜಲಗಡಿ ಉಲ್ಲಂಘಿಸಿ ಬಾಟಮ್ ಟ್ರಾಲಿಂಗ್ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಶ್ರೀಲಂಕಾ ನೌಕಾಪಡೆ ವಕ್ತಾರ ಚಮಿಂಡ ವಲಕುಲುಗೆ ತಿಳಿಸಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಮೀನುಗಾರರನ್ನು ಬಿಡುಗಡೆ ಮಾಡುವಂತೆ ಅಲ್ಲಿನ ಮುಖಂಡರಿಗೆ ಮನವಿ ಮಾಡಿದ್ದಾರೆ.