
ಫೆಬ್ರವರಿ 28ರ ದಾಳಿಯಲ್ಲಿ ಗಾಯಗೊಂಡಿದ್ದ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಮೇನಿ (56) ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಮೊದಲ ವಿಡಿಯೋ ಬಿಡುಗಡೆಯಾಗಿದೆ.
ಈ ವಿಡಿಯೋದಲ್ಲಿ ಅವರು ಧಾರ್ಮಿಕ ಅಧಿವೇಶನವೊಂದರಲ್ಲಿ ವಿದ್ಯಾರ್ಥಿಯ ಪ್ರಬಂಧಕ್ಕೆ 20ಕ್ಕೆ 19.5 ಅಂಕ ನೀಡಿ ಮೌಲ್ಯಮಾಪನ ಮಾಡುತ್ತಿರುವುದು ಕಂಡುಬಂದಿದೆ.
ಅಮೆರಿಕದ ಆರ್ಥಿಕ ನಿರ್ಬಂಧಗಳ ನಡುವೆ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಮೊಜ್ತಬಾ ರಹಸ್ಯ ನೆಲೆಗಳಿಂದ ಯುದ್ಧ ತಂತ್ರಗಳನ್ನು ಮುನ್ನಡೆಸುತ್ತಿದ್ದಾರೆ.