
ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದರೂ, ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನೀರಿನ ಸಂಗ್ರಹವು 88.87 ಟಿಎಂಸಿ ಅಂದರೆ ಶೇ.10ರಷ್ಟು ಇಳಿಕೆಯಾಗಿದೆ.
ಸೆಪ್ಟೆಂಬರ್ 4ರಂದು ಜಲಾಶಯಗಳಲ್ಲಿ 687.07 ಟಿಎಂಸಿ (ಶೇ.77) ನೀರಿತ್ತು, ಆದರೆ ಅಕ್ಟೋಬರ್ 4ಕ್ಕೆ ಅದು 598.20 ಟಿಎಂಸಿಗೆ (ಶೇ.67) ಕುಸಿದಿದೆ ಎಂದು ವರದಿಯಾಗಿದೆ.
ಮನ್ನಾರ್ ಕೊಲ್ಲಿ ಮತ್ತು ದಕ್ಷಿಣ ತಮಿಳುನಾಡು ಕರಾವಳಿ ಭಾಗದಲ್ಲಿ ಮೇಲ್ಮೈ ವಾಯುಭಾರ ಕುಸಿತದ ಸುಳಿಗಾಳಿ ಉಂಟಾಗಿರುವುದರಿಂದ ಮುಂದಿನ ಎರಡರಿಂದ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.