
ಯಶ್ ಅಭಿನಯದ 'ರಾಮಾಯಣ' ಚಿತ್ರದ ಟ್ರೇಲರ್ನಲ್ಲಿನ ಸಿಂಹದ ಜೊತೆಗಿನ ಘರ್ಜನೆಯ ದೃಶ್ಯವನ್ನು ಮಂಗಳೂರಿನ ಕಲಾವಿದ ಜೀವನ್ ಕುಲಾಲ್ ಪೆನ್ಸಿಲ್ ಆರ್ಟ್ ಮೂಲಕ ಚಿತ್ರಿಸಿದ್ದಾರೆ.
ಯಾವುದೇ ಔಪಚಾರಿಕ ತರಬೇತಿ ಪಡೆಯದ ಜೀವನ್, 2012ರಿಂದ ನಿರಂತರ ಅಭ್ಯಾಸದ ಮೂಲಕ ಕಲೆ ಕಲಿತಿದ್ದು, ಈ ಚಿತ್ರಕ್ಕಾಗಿ 200 GSM Brustro ಪೇಪರ್ ಮತ್ತು ಚಾರ್ಕೋಲ್ ಪೆನ್ಸಿಲ್ಗಳನ್ನು ಬಳಸಿದ್ದಾರೆ.
ಯಶ್ ಅವರ ಮುಂಬರುವ 'ರಾಮಾಯಣ' ಮತ್ತು 'ಟಾಕ್ಸಿಕ್' ಸಿನಿಮಾಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಜೀವನ್ ಅವರ ಈ ಕಲಾಕೃತಿ ಇದೀಗ ವೈರಲ್ ಆಗಿದೆ.