
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಸಂಜೀವ್ ಶ್ರೀವಾಸ್ತವ ಅವರಿಗೆ ಅತ್ಯುತ್ತಮ ವಿಮರ್ಶಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಗುಜರಾತ್ನ ಏಕ್ತಾ ನಗರದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಜೀವ್ ಶ್ರೀವಾಸ್ತವ ಅವರಿಗೆ ಗೋಲ್ಡನ್ ಲೋಟಸ್ ಪದಕವನ್ನು ಪ್ರದಾನ ಮಾಡಿದರು.
ಕಳೆದ 25 ವರ್ಷಗಳಿಂದ ಸಿನೆಮಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ಈ ಪ್ರಶಸ್ತಿ ಸ್ವೀಕರಿಸಿರುವುದು ತಮ್ಮ ಕನಸು ನನಸಾದಂತೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.