
ಬಾಗಲಕೋಟೆ ಜಿಲ್ಲೆಯ ಮೂರು ತಾಲ್ಲೂಕುಗಳ ವ್ಯಾಪ್ತಿಯ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಒಬ್ಬರೇ ವೈದ್ಯಾಧಿಕಾರಿ ಉಸ್ತುವಾರಿ ವಹಿಸಿಕೊಂಡಿದ್ದು, ರೋಗಿಗಳಿಗೆ ತೊಂದರೆಯಾಗುತ್ತಿದೆ.
ಡಾ. ಲಕ್ಷ್ಮಣ ಸನೆಲಿ ಅವರು ತೋಗುಣಸಿ, ಪಟ್ಟದಕಲ್ಲು, ಗಿರಿಸಾಗರ ಮತ್ತು ಗಲಗಲಿ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, ಇವುಗಳ ನಡುವಿನ ಅಂತರ 72 ಕಿ.ಮೀ.ವರೆಗೆ ಇದೆ.
ಜಿಲ್ಲೆಯ 48 ಪಿಎಚ್‌ಸಿಗಳಲ್ಲಿ ಕೇವಲ 16 ಮಂದಿ ಕಾಯಂ ವೈದ್ಯರಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಸಮುದಾಯ ಆರೋಗ್ಯಾಧಿಕಾರಿಗಳು ರೋಗಿಗಳ ತಪಾಸಣೆ ನಡೆಸುವ ಅನಿವಾರ್ಯತೆ ಉಂಟಾಗಿದೆ.