
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಸುಳ್ಳು ಆರೋಪ ಮಾಡಲು ರಾಹುಲ್ ಗಾಂಧಿಯೇ ಪವನ್ ಖೇರಾಗೆ ಸೂಚಿಸಿದ್ದರು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.
ಸುಳ್ಳು ಆರೋಪಗಳು ಉಲ್ಟಾ ಹೊಡೆದ ನಂತರ, ಪವನ್ ಖೇರಾಗೆ ಅರ್ಹತೆಯಿಲ್ಲದಿದ್ದರೂ ರಾಜ್ಯಸಭಾ ಸ್ಥಾನವನ್ನು ಬಹುಮಾನವಾಗಿ ನೀಡಲಾಯಿತು ಎಂದು ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ತಮಗೆ ತಿಳಿಸಿದ್ದಾರೆಂದು ರಿಜಿಜು ಹೇಳಿದ್ದಾರೆ.
ಅಸ್ಸಾಂ ವಿಧಾನಸಭೆ ಚುನಾವಣೆಗೂ ಮುನ್ನ ಖೇರಾ, ರಿನಿಕಿ ಭುಯಾನ್ ಶರ್ಮಾ ಹಲವು ದೇಶಗಳ ಪಾಸ್ಪೋರ್ಟ್ಗಳನ್ನು ಹೊಂದಿದ್ದಾರೆ ಮತ್ತು ದುಬೈನಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.