
ಆಸ್ತಿ ಉಯಿಲಿನ ಸಾಕ್ಷಿ ಕೆ.ಎನ್. ಮೋಹನ್ ರೆಡ್ಡಿ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಕ್ಕಾಗಿ ವೈಟ್ಫೀಲ್ಡ್ ಪೊಲೀಸರನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರ ಮಧ್ಯಪ್ರವೇಶವನ್ನು ಖಂಡಿಸಿ ತನಿಖಾಧಿಕಾರಿ ಮತ್ತು ಉನ್ನತಾಧಿಕಾರಿಗಳ ಜೇಬಿನಿಂದ 3 ಲಕ್ಷ ರೂಪಾಯಿ ದಂಡ ಪಾವತಿಸಲು ಆದೇಶಿಸಿದೆ.
ಆಗಸ್ಟ್ 27ಕ್ಕೆ ಹಾಜರಾಗಲು ನೋಟಿಸ್ ನೀಡಿದ್ದರೂ ಆಗಸ್ಟ್ 25ರಂದೇ ಬಂಧಿಸಿದ್ದನ್ನು ಕಾನೂನುಬಾಹಿರ ಎಂದು ಘೋಷಿಸಿ, ಇಂತಹ ಬಂಧನಗಳನ್ನು ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.