
ನವೆಂಬರ್ 19ರಿಂದ ಕತಾರ್ನಲ್ಲಿ ಆರಂಭವಾಗಲಿರುವ 50 ಓವರ್ಗಳ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಗೆ 15 ಆಟಗಾರರ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಅಬ್ದುಲ್ ಸಮದ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿರುವ ಪಾಕಿಸ್ತಾನ ತಂಡವು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ನವೆಂಬರ್ 20ರಂದು ಯುಎಇ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಪಾಕಿಸ್ತಾನ ತಂಡವು ನವೆಂಬರ್ 22ರಂದು ಭಾರತ 'ಎ' ತಂಡವನ್ನು ಹಾಗೂ ನವೆಂಬರ್ 25ರಂದು ನೇಪಾಳ ತಂಡವನ್ನು ಗುಂಪು ಹಂತದಲ್ಲಿ ಎದುರಿಸಲಿದೆ.