
ಚೀನಾದಲ್ಲಿ ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ನಿರ್ಮಿಸಲಾದ 'ಸಾನ್‌ಕ್ಸಿಂಗ್‌ಡುಯಿ: ಫ್ಯೂಚರ್ ಪಾಸ್ಟ್' ಸಿನಿಮಾ ಬಿಡುಗಡೆಯಾಗಿದೆ.
ಕಳೆದ ಅಕ್ಟೋಬರ್ 23 ರಂದು ತೆರೆಕಂಡ ಈ ದೊಡ್ಡ ಬಜೆಟ್‌ನ ಚಿತ್ರವು ಮೊದಲ ಆರು ದಿನಗಳಲ್ಲಿ ಕೇವಲ 1.5 ಕೋಟಿ ರೂಪಾಯಿ ಮಾತ್ರ ಗಳಿಸುವ ಮೂಲಕ ಸೋಲು ಕಂಡಿದೆ.
ವಿನೂತನ ತಂತ್ರಜ್ಞಾನದ ಈ ಪ್ರಯೋಗಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರ್ಮಾಣ ಸಂಸ್ಥೆಗೆ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ನಿರಾಸೆ ಎದುರಾಗಿದೆ.