
ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನ ಗಾಲ್ಫ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಮೈಸೂರಿನ ಕ್ರೀಡಾಪಟು ಪ್ರಣವಿ ಎಸ್. ಅರಸ್ ಅವರಿಗೆ ತವರಿಗೆ ಮರಳಿದ ವೇಳೆ ಅದ್ದೂರಿ ಸ್ವಾಗತ ಕೋರಲಾಗಿದೆ.
ಮೈಸೂರು ನಗರದಾದ್ಯಂತ ತೆರೆದ ವಾಹನದಲ್ಲಿ ಪ್ರಣವಿ ಅರಸ್ ಅವರ ಮೆರವಣಿಗೆ ನಡೆಸಲಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ಮತ್ತು ಸಾರ್ವಜನಿಕರು ಶುಭ ಹಾರೈಸಿದ್ದಾರೆ.
ನಗರದ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರಣವಿ ಅರಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.