
ಕಂಬಳ ಜಾನಪದ ಕ್ರೀಡೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ‘ಕರಾವಳಿ’ ಸಿನಿಮಾ ಆಗಸ್ಟ್ 28ರಿಂದ ಜೀ5 ಒಟಿಟಿ ವೇದಿಕೆಯಲ್ಲಿ ಡಿಜಿಟಲ್ ಪ್ರಸಾರ ಆರಂಭಿಸಲಿದೆ.
ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರವು ಬಿಡುಗಡೆಯ ಸಮಯದಲ್ಲಿ ಸಂಭಾವನೆ ವಿಚಾರವಾಗಿ ವಿವಾದಕ್ಕೆ ಸಿಲುಕಿತ್ತು.
ಕರಾವಳಿಯ ಸಂಸ್ಕೃತಿ ಮತ್ತು ಮಾನವ-ಪ್ರಾಣಿ ಸಂಬಂಧದ ಕಥಾಹಂದರ ಹೊಂದಿರುವ ಈ ಸಿನಿಮಾ ಥಿಯೇಟರ್ಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿತ್ತು.