
ಟೀಮ್ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಈ ತಿಂಗಳ ಕೊನೆಗೆ ಮುಕ್ತಾಯಗೊಳ್ಳಲಿದ್ದು, ಬಿಸಿಸಿಐ ಅವರಿಗೆ ವಿಸ್ತರಣೆ ನೀಡುವ ಮುನ್ಸೂಚನೆ ಕಾಣಿಸದ ಕಾರಣ ಅವರ ನಿರ್ಗಮನ ಬಹುತೇಕ ಖಚಿತವಾಗಿದೆ.
ಅಗರ್ಕರ್ ಸ್ಥಾನಕ್ಕೆ ಮಾಜಿ ಕ್ರಿಕೆಟಿಗರಾದ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು, ಬಿಸಿಸಿಐ ಇಬ್ಬರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಿದೆ.
ಶುಕ್ರವಾರ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರಬೀಳಲಿದ್ದು, ಇಬ್ಬರೂ ಕ್ರಿಕೆಟಿಗರು ಐಪಿಎಲ್ನಲ್ಲಿ ಮೂರು ಬಾರಿ ಟ್ರೋಫಿ ಗೆದ್ದ ಅನುಭವ ಹೊಂದಿದ್ದಾರೆ.