
2027ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಟಿಕೆಟ್‌ಗಳಿಗಾಗಿ ಜಾಗತಿಕ ಮಟ್ಟದಲ್ಲಿ 12,08,09,467 ಮುಂಗಡ ಅರ್ಜಿಗಳು ಸಲ್ಲಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿವೆ.
ಅಕ್ಟೋಬರ್ 10, 2027ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬರೋಬ್ಬರಿ 83,97,294 ಅರ್ಜಿಗಳು ಬಂದಿದ್ದು, ಫೈನಲ್ ಪಂದ್ಯದ ಅರ್ಜಿಗಳನ್ನೂ ಇದು ಮೀರಿಸಿದೆ.
ವಿಶ್ವದ 193 ದೇಶಗಳಿಂದ ಸುಮಾರು 28 ಲಕ್ಷ ಅಭಿಮಾನಿಗಳು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದು, 3.25 ಕೋಟಿಗೂ ಹೆಚ್ಚು ಒಟ್ಟು ನೋಂದಣಿಗಳು ದಾಖಲಾಗಿವೆ.