
ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಟಿಕೆಟ್ ಮಾರಾಟ ಆರಂಭವಾದ ಎರಡೇ ವಾರಗಳಲ್ಲಿ 50,000ಕ್ಕೂ ಹೆಚ್ಚು ಟಿಕೆಟ್ಗಳು ಬಿಕರಿಯಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿದೆ.
ಅಕ್ಟೋಬರ್ 30ರಂದು ಆಕ್ಲೆಂಡ್ನಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಇಡನ್ ಪಾರ್ಕ್ ಕ್ರೀಡಾಂಗಣದ 6ನೇ ಟಿಯರ್ ಆಸನ ಶ್ರೇಣಿಯನ್ನು ತೆರೆಯಲು ನಿರ್ಧರಿಸಲಾಗಿದೆ.
ಈ ಸರಣಿಯಲ್ಲಿ ಭಾರತವು 5 ಟಿ20, 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಅಕ್ಟೋಬರ್ 22ರಂದು ಕ್ರೈಸ್ಟ್ಚರ್ಚ್ನಲ್ಲಿ ಮೊದಲ ಟಿ20 ಪಂದ್ಯ ಆರಂಭವಾಗಲಿದೆ.