
ವಿಜಯದಶಮಿಯ ದಿನವಾದ ಇಂದು ನವದೆಹಲಿಯ ದ್ವಾರಕಾ ಸೆಕ್ಟರ್ 10ರಲ್ಲಿರುವ ಶ್ರೀ ರಾಮ್ ಲೀಲಾ ಕಮಿಟಿ ಮೈದಾನದಲ್ಲಿ ದಸರಾ ಮಹೋತ್ಸವ ನಡೆಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಸ್ಸಿನಿಂದ ಸಾಂಕೇತಿಕವಾಗಿ ಬಾಣವನ್ನು ಬಿಡುವ ಮೂಲಕ ಬೃಹತ್ ರಾವಣನ ಪುತ್ಥಳಿಗೆ ಬೆಂಕಿ ಸ್ಪರ್ಶಿಸಿ ರಾವಣ ದಹನ ನೆರವೇರಿಸಿದರು.
ಈ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ದಸರಾ ಹಬ್ಬದ ಶುಭಾಶಯ ಕೋರಿದ ರಾಷ್ಟ್ರಪತಿಗಳು, ಶ್ರೀರಾಮನ ಆದರ್ಶಗಳು ಮತ್ತು ಧರ್ಮದ ಹಾದಿಯಲ್ಲಿ ಸಾಗುವಂತೆ ಕರೆ ನೀಡಿದರು.