
ಉಕ್ರೇನ್‌ನ ಒಡೆಸಾ ಬಂದರಿನಲ್ಲಿ ಶನಿವಾರ ನಡೆದ ದಾಳಿಯಲ್ಲಿ ನಾಲ್ವರು ಭಾರತೀಯರಿದ್ದ 'ಎಂವಿ ಎಜಿಎನ್ ರಾಗ್ನರ್' ಎಂಬ ವಾಣಿಜ್ಯ ಹಡಗು ಸಿಲುಕಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.
ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಾಪತ್ತೆಯಾದ ಇಬ್ಬರಿಗಾಗಿ ರಕ್ಷಣಾ ಕಾರ್ಯ ಕೈಗೊಂಡಿದ್ದು, ಉಳಿದ ಇಬ್ಬರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಭಾನುವಾರ ಖಚಿತಪಡಿಸಿದೆ.
ಸಂಘರ್ಷ ಪೀಡಿತ ಕಪ್ಪು ಸಮುದ್ರದ ಪ್ರದೇಶಗಳಲ್ಲಿ ಕೆಲಸಕ್ಕೆ ಸೇರುವ ಮುನ್ನ ಭದ್ರತಾ ವ್ಯವಸ್ಥೆ ಮತ್ತು ವಿಮೆ ಬಗ್ಗೆ ಪರಿಶೀಲಿಸುವಂತೆ ವಿದೇಶಾಂಗ ಸಚಿವಾಲಯ ಭಾರತೀಯರಿಗೆ ಎಚ್ಚರಿಕೆ ನೀಡಿದೆ.