
ಬೆಂಗಳೂರಿನ ರಾಜಾಜಿನಗರದ ಸರಣಿ ಕೊಲೆ ಪ್ರಕರಣದಲ್ಲಿ ತಮಿಳುನಾಡಿನ ಸೇಲಂ ಎರಕ್ಕಾಡು ಪ್ರದೇಶದಲ್ಲಿ ಇಂದುಶೇಖರ್ ಅವರ ಪತ್ನಿ ಸುನಿತಾ ಮತ್ತು ಅತ್ತೆ ರೂಪವತಿ ಅವರ ಶವಗಳು ಪತ್ತೆಯಾಗಿವೆ.
ಈವರೆಗೆ ಒಟ್ಟು ಮೂವರು ಮೃತದೇಹಗಳು ಪತ್ತೆಯಾಗಿದ್ದು, ಇದಕ್ಕೂ ಮುನ್ನ ಬಾಲಕ ಪುನೀತ್‌ನ ಶವ ನಂದಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆಯಾದ ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ಕೈಕಾಲು ಮುರಿದು ಸೆಲ್ಲೋಟೇಪ್ ಸುತ್ತಲಾಗಿದ್ದು, ದುರ್ವಾಸನೆ ಬಾರದಂತೆ ರೋಸ್ ವಾಟರ್ ಸಿಂಪಡಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.