
ನಟಿ ವೈಷ್ಣವಿ ಗೌಡ ಅಭಿನಯದ 'ಗೆಳತಿ ಗಾಯತ್ರಿ' ಎಂಬ ಹೊಸ ಧಾರಾವಾಹಿಯು ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಸನ್ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಬಾಲ್ಯದ ಗೆಳತಿಯರಾದ ಪಾರ್ವತಿ ಮತ್ತು ಗಾಯತ್ರಿಯರ ಭಾವನಾತ್ಮಕ ಪಯಣದ ಕಥೆಯನ್ನು ಹೊಂದಿರುವ ಈ ಸೀರಿಯಲ್ನಲ್ಲಿ ಕೃತಿಕಾ ಮತ್ತು ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಶ್ರೀ ಜೈ ಮಾತಾ ಕಂಬೈನ್ಸ್ ನಿರ್ಮಾಣದ ಈ ಧಾರಾವಾಹಿಗೆ ಯಶವಂತ ಪಾಂಡು ನಿರ್ದೇಶನವಿದ್ದು, ವಿಕಾಸ ನೇಗಿಲೋಣಿ ಚಿತ್ರಕಥೆ ಮತ್ತು ಅನಂತ ಗೌಡ ಅವರ ಛಾಯಾಗ್ರಹಣವಿದೆ.