
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಜೂನ್ ತ್ರೈಮಾಸಿಕದಲ್ಲಿ ₹1,783 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 48ರಷ್ಟು ಇಳಿಕೆ ದಾಖಲಾಗಿದೆ.
ಯುಎಇಯ ಎನ್ಎಂಸಿ ಸಮೂಹದೊಂದಿಗಿನ ಪ್ರಕರಣ ಇತ್ಯರ್ಥಕ್ಕೆ ₹5,700 ಕೋಟಿ ಪಾವತಿಸಿರುವುದು ಲಾಭದ ಕುಸಿತಕ್ಕೆ ಪ್ರಮುಖ ಕಾರಣ ಎಂದು ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ನ ನಿವ್ವಳ ಬಡ್ಡಿ ವರಮಾನ ಶೇ 10ರಷ್ಟು ಏರಿಕೆಯಾಗಿ ₹12,524 ಕೋಟಿ ತಲುಪಿದ್ದು, ವಸೂಲಾಗದ ಸಾಲದ ಪ್ರಮಾಣ ಶೇ 1.89ರಿಂದ ಶೇ 1.99ಕ್ಕೆ ಏರಿಕೆ ಕಂಡಿದೆ.