2025-26ನೇ ಸಾಲಿನಲ್ಲಿ ಗಂಗಡಿಕಲ್, ಕುರಿಂಜಾಲ್, ಕುದುರೆಮುಖ ಮತ್ತು ಗಡಾಯಿಕಲ್ಲು ಚಾರಣ ತಾಣಗಳಿಂದ ಸರ್ಕಾರಕ್ಕೆ ಒಟ್ಟು 5.20 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಕುದುರೆಮುಖ ವಲಯದಲ್ಲಿ 350 ಮಂದಿ ಗೈಡ್‌ಗಳಾಗಿ ನೋಂದಾಯಿಸಿಕೊಂಡಿದ್ದು, ಪ್ರತಿ ಚಾರಣಿಗರಿಂದ 100 ರೂ. ಶುಲ್ಕ ಸಂಗ್ರಹಿಸಿ ಅವರಿಗೆ 1,000 ರೂ. ಗೌರವಧನ ನೀಡಲಾಗುತ್ತಿದೆ.
ಆ್ಯಂಟಿ ಪೋಚಿಂಗ್ ಕ್ಯಾಂಪ್ ಅಡಿಯಲ್ಲಿ 200 ಯುವಕರಿಗೆ ಉದ್ಯೋಗ ನೀಡಲಾಗಿದ್ದು, ಅವರಿಗೆ ತಿಂಗಳಿಗೆ 16,700 ರೂ. ವೇತನದೊಂದಿಗೆ ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಒದಗಿಸಲಾಗುತ್ತಿದೆ.