
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನಗಳ ಹಾರಾಟ ಪದೇ ಪದೇ ವಿಳಂಬವಾಗಿದ್ದಕ್ಕೆ 200ಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.
ತಾಂತ್ರಿಕ ದೋಷ ಮತ್ತು ಕಾರ್ಯಾಚರಣೆಯ ಕಾರಣ ನೀಡಿ ವೇಳಾಪಟ್ಟಿಯನ್ನು ಪದೇ ಪದೇ ಮುಂದೂಡಿದ್ದರಿಂದ ಪ್ರಯಾಣಿಕರು ಟರ್ಮಿನಲ್‌ನಲ್ಲಿ ರಾತ್ರಿಯಿಡೀ ಪರದಾಡಿದ್ದಾರೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಸ್ಪೈಸ್‌ಜೆಟ್ ಸಂಸ್ಥೆ ಕ್ಷಮೆಯಾಚಿಸಿದ್ದು, ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.