
ಬ್ಯಾಂಕಿಂಗ್ ಮತ್ತು ಎಫ್ಎಂಸಿಜಿ ವಲಯದ ಷೇರುಗಳ ಖರೀದಿಯಿಂದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 905 ಅಂಶ ಏರಿಕೆಯಾಗಿ 74,151ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರುಪೇಟೆ ನಿಫ್ಟಿ 237 ಅಂಶ ಏರಿಕೆ ಕಂಡು 22,936ರಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮತ್ತು ಕಚ್ಚಾ ತೈಲ ದರ ಇಳಿಕೆಯು ಮಾರುಕಟ್ಟೆಯ ಏರಿಕೆಗೆ ಸಹಕಾರಿಯಾಗಿದೆ.