
ಆಲೂರು ತಾಲ್ಲೂಕಿನಲ್ಲಿ ಅಕ್ಟೋಬರ್ 31ರಂದು ನಡೆಯಲಿರುವ ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಿ.ಸುಜಲಾದೇವಿ ಕುಂದೂರು ಆಯ್ಕೆಯಾಗಿದ್ದಾರೆ.
ಕೊಡಗಿನ ಶನಿವಾರಸಂತೆ ಶಾಲೆಯ ಪ್ರಾಂಶುಪಾಲೆಯಾಗಿರುವ ಇವರು, ಆಕಾಶವಾಣಿ ಉದ್ಘೋಷಕಿಯಾಗಿ ಹಾಗೂ ಹವ್ಯಾಸಿ ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅಂದು ಬೆಳಿಗ್ಗೆ ನಡೆಯಲಿರುವ ಸಮ್ಮೇಳನವನ್ನು ಕಾಸಾಪ ಜಿಲ್ಲಾ ಘಟಕದ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಉದ್ಘಾಟಿಸಲಿದ್ದಾರೆ.