
ಅಪ್ರಾಪ್ತ ಮಕ್ಕಳ ಆರ್ಥಿಕ ಭದ್ರತೆಗಾಗಿ ಸರ್ಕಾರ ಜಾರಿಗೆ ತಂದ 'ಎನ್ಪಿಎಸ್ ವಾತ್ಸಲ್ಯ' ಯೋಜನೆಯು ಎರಡು ವರ್ಷ ಪೂರೈಸಿದ್ದು, ದೇಶಾದ್ಯಂತ ಒಟ್ಟು ಖಾತೆಗಳ ಸಂಖ್ಯೆ 4.9 ಲಕ್ಷಕ್ಕೇರಿದೆ.
ಪಿಂಚಣಿ ನಿಯಂತ್ರಣ ಪ್ರಾಧಿಕಾರದ ವರದಿಯ ಪ್ರಕಾರ ಹೂಡಿಕೆದಾರರ ಒಟ್ಟು ನಿರ್ವಹಣಾ ಆಸ್ತಿ ಮೌಲ್ಯವು 403 ಕೋಟಿ ರೂಪಾಯಿ ದಾಟಿದೆ.
ಪೋಷಕರು ವರ್ಷಕ್ಕೆ ಕನಿಷ್ಠ 1,000 ರೂ. ಹೂಡಿಕೆ ಮಾಡಿ ಖಾತೆ ತೆರೆಯಬಹುದಾಗಿದ್ದು, ಮಗುವಿಗೆ 18 ವರ್ಷ ತುಂಬಿದ ನಂತರ ಇದು ಸಾಮಾನ್ಯ ಎನ್ಪಿಎಸ್ ಖಾತೆಯಾಗಿ ಬದಲಾಗುತ್ತದೆ.