
ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ರಾಜರಾಜೇಶ್ವರಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಿರಣ್ ನಾಯ್ಡು, ಲೋಹಿತ್ ಗೌಡ, ಮಂಜುನಾಥ್, ಲಕ್ಷ್ಮೀ ಜಯರಾಮ್, ಇನ್ಸ್ಪೆಕ್ಟರ್ಗಳಾದ ಅಯ್ಯಣ್ಣ ರೆಡ್ಡಿ, ಬಿ.ಎನ್. ಲೋಹಿತ್ ಮತ್ತು ಸಬ್ಇನ್ಸ್ಪೆಕ್ಟರ್ ಚಂದ್ರಶೇಖರ್ ಸೇರಿದಂತೆ ಹಲವರ ವಿರುದ್ಧ ಸೆಕ್ಷನ್ 395, 363, 345(C) ಅಡಿ ಪ್ರಕರಣ ದಾಖಲಾಗಿದೆ.
2021ರ ಅಕ್ಟೋಬರ್ನಲ್ಲಿ ದೂರುದಾರ ಮಹಿಳೆಯನ್ನು ಬಂಧಿಸಿ, ನಂತರ ದೆಹಲಿಗೆ ಕರೆದೊಯ್ದು ಹಿಂದಿನ ಕೇಸ್ ವಾಪಸ್ ಪಡೆಯುವಂತೆ ಮುನಿರತ್ನ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.