
ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ 64 ಪಿಜಿಗಳ ಮೇಲೆ ದಾಳಿ ನಡೆಸಿದ್ದು, ನೈರ್ಮಲ್ಯ ಕೊರತೆ ಮತ್ತು ನಿಯಮ ಉಲ್ಲಂಘನೆಗಾಗಿ 23 ಪಿಜಿಗಳಿಗೆ ನೋಟಿಸ್ ಜಾರಿ ಮಾಡಿದೆ.
ತಪಾಸಣೆ ವೇಳೆ ಅವಧಿ ಮೀರಿದ ಮೊಸರು, ಬಿಸಿಬೇಳೆ ಬಾತ್ ಪೌಡರ್ ಮತ್ತು ಮಿಸ್‌ಬ್ರ್ಯಾಂಡೆಡ್ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೊಮ್ಮಸಂದ್ರದ ನಂದನ ಎಲೈಟ್ ಪಿಜಿಯಲ್ಲಿ ಊಟದ ಮೇಜಿನ ಮೇಲೆ ತಿಗಣೆ ನಿವಾರಕ ಪೌಡರ್ ಪತ್ತೆಯಾದ ಹಿನ್ನೆಲೆಯಲ್ಲಿ, ಆ ಪಿಜಿಯ ಡೈನಿಂಗ್ ಏರಿಯಾವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.