
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.
ಶೃಂಗೇರಿಯ ಗಾಂಧಿ ಮೈದಾನ, ದೇಗುಲದ ಪಾರ್ಕಿಂಗ್ ಪ್ರದೇಶ ಮತ್ತು ಕಳಸ ತಾಲೂಕಿನ ಹಲವು ತೋಟಗಳು ಜಲಾವೃತವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.
ಮಳೆಯಿಂದಾಗಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಹಲವು ಕುಗ್ರಾಮಗಳು ಕತ್ತಲಲ್ಲಿವೆ ಮತ್ತು ಪ್ರವಾಸಿಗರು ನದಿ ತೀರಕ್ಕೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.