
ನರಸಿಂಹರಾಜಪುರದ ಮಡಬೂರು ಮತ್ತು ಕೆ. ಕಣಬೂರು ಗ್ರಾಮಗಳಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಎಕ್ಕಡಬೈಲಿನಲ್ಲಿ ಒಂದು ಹಸು ಮೃತಪಟ್ಟಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 806 ಜಾನುವಾರುಗಳಿದ್ದು, ಈ ಪೈಕಿ 620 ಜಾನುವಾರುಗಳಿಗೆ ಮೇ ತಿಂಗಳಲ್ಲೇ ಲಸಿಕೆ ಹಾಕಲಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ. ವಿನಯ್ ತಿಳಿಸಿದ್ದಾರೆ.
ಕೆಲವು ರೈತರು ಲಸಿಕೆ ಹಾಕಿಸಲು ಹಿಂದೇಟು ಹಾಕಿದ್ದು, ರೋಗ ಹರಡದಂತೆ ಪಶು ವೈದ್ಯ ಇಲಾಖೆ ಹೆಚ್ಚಿನ ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.