
ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದ ಸಿಐಡಿ ತನಿಖೆ ವೇಳೆ ಆರೋಪಿ ಬಸವರಾಜ್ ಕನ್ನಾಳೆ ಅವರ ಡೈರಿಯಲ್ಲಿ ಆರ್ಟಿಒ ಇನ್ಸ್‌ಪೆಕ್ಟರ್‌ಗಳ ಹೆಸರು ಹಾಗೂ ಬಾಕಿ ಹಣದ ಲೆಕ್ಕ ಪತ್ತೆಯಾಗಿದೆ.
ಡೈರಿಯಲ್ಲಿ ಗೋವರ್ಧನ್, ಹರೀಶ್, ಪದ್ಮಾವತಿ ಸೇರಿದಂತೆ ಎಂಟು ಅಭ್ಯರ್ಥಿಗಳ ಹೆಸರು ಹಾಗೂ ಅವರಿಂದ ಬರಬೇಕಿದ್ದ 5 ರಿಂದ 10 ಲಕ್ಷ ರೂಪಾಯಿಗಳ ವರೆಗಿನ ಬಾಕಿ ಹಣದ ವಿವರಗಳು ದಾಖಲಾಗಿವೆ.
ಆರ್ಟಿಒ ಇನ್ಸ್‌ಪೆಕ್ಟರ್ ಹುದ್ದೆಗಾಗಿ ಅಭ್ಯರ್ಥಿಗಳು ತಲಾ 2 ಕೋಟಿ ರೂಪಾಯಿ ನೀಡಿರುವ ಆರೋಪದ ಬಗ್ಗೆ ಸಿಐಡಿ ತನಿಖೆ ಮುಂದುವರಿದಿದ್ದು, ಇನ್ಸ್‌ಪೆಕ್ಟರ್‌ಗಳ ವಿಚಾರಣೆಯ ಸಾಧ್ಯತೆ ಇದೆ.