
ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ಕೌಟುಂಬಿಕ ಹಾಗೂ ಥ್ರಿಲ್ಲರ್ ಕಥೆಯುಳ್ಳ 'ರುದ್ರಾಭಿಷೇಕಂ' ಸಿನಿಮಾದ 53 ಸೆಕೆಂಡುಗಳ ಟೀಸರ್ ಬಿಡುಗಡೆಯಾಗಿದೆ.
ಈ ಸಿನಿಮಾವನ್ನು ಒಂಬತ್ತು ಮಂದಿ ರೈತರು ನಿರ್ಮಿಸಿದ್ದು, ವಸಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ ಹಾಗೂ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ.
ಆಧುನಿಕ ಗ್ರಾಮೀಣ ಹಿನ್ನೆಲೆಯ ಈ ಚಿತ್ರದಲ್ಲಿ ವೀರಭದ್ರ ಸ್ವಾಮಿಯ ಮಹಿಮೆಯ ಪೌರಾಣಿಕ ಛಾಯೆಯೂ ಇದ್ದು, ಸೆಪ್ಟೆಂಬರ್ 25ರಂದು ತೆರೆಕಾಣಲಿದೆ.