
ಬ್ಲೂಬೆರಿ, ಸ್ಟ್ರಾಬೆರಿ, ರಾಸ್ಪ್ಬೆರಿ, ಬ್ಲ್ಯಾಕ್ಬೆರಿ ಮತ್ತು ಕ್ರ್ಯಾನ್ಬೆರಿ ಹಣ್ಣುಗಳು ಫೈಬರ್, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳ ಆಗರವಾಗಿದ್ದು ಹೃದಯ ಹಾಗೂ ಮೆದುಳಿನ ಆರೋಗ್ಯಕ್ಕೆ ಉತ್ತಮ.
ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ 75–150 ಗ್ರಾಂ ಬೆರ್ರಿ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಬಹುದು.
ಅಲರ್ಜಿ ಇರುವವರು, ಮಧುಮೇಹ ಮತ್ತು ಕಿಡ್ನಿ ಸಮಸ್ಯೆ ಇರುವವರು ಈ ಹಣ್ಣುಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.