
ತುಮಕೂರಿನ ಸರ್ಕಾರಿ ಕ್ರೀಡಾ ಹಾಸ್ಟೆಲ್ನ ವಿದ್ಯಾರ್ಥಿನಿ ಆರ್.ವಿ. ಪ್ರಾಪ್ತಿ ಅವರು ಅಥ್ಲೆಟಿಕ್ಸ್ನಲ್ಲಿ ಹ್ಯಾಟ್ರಿಕ್ ಪದಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಮೂಲದ ಪ್ರಾಪ್ತಿ, 2025ರ ದಕ್ಷಿಣ ವಲಯ ಅಥ್ಲೆಟಿಕ್ಸ್ ಹಾಗೂ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮೀಟ್ನಲ್ಲಿ ಪದಕಗಳನ್ನು ಜಯಿಸಿದ್ದಾರೆ.
ಸದ್ಯ 10ನೇ ತರಗತಿಯಲ್ಲಿ ಓದುತ್ತಿರುವ ಅವರು, ಇದೇ ವರ್ಷ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಉದ್ದ ಜಿಗಿತದಲ್ಲಿ ಪದಕ ಗೆಲ್ಲಲು ತಾಲೀಮು ನಡೆಸುತ್ತಿದ್ದಾರೆ.