
ಕರ್ನಾಟಕದಲ್ಲಿ 2021-22ರಿಂದ 2025-26ರ ಅವಧಿಯಲ್ಲಿ ಅಡಿಕೆ ಬೆಳೆಯುವ ಪ್ರದೇಶವು 6,03,121 ಹೆಕ್ಟೇರ್ನಿಂದ 7,98,677 ಹೆಕ್ಟೇರ್ಗೆ ಶೇ.32ರಷ್ಟು ವಿಸ್ತರಣೆಯಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಬೆಳೆ ಪ್ರದೇಶ ಹೆಚ್ಚಾಗಿದ್ದರೂ, ಅಡಿಕೆ ಉತ್ಪಾದನೆಯು ಪ್ರತಿ ಹೆಕ್ಟೇರ್ಗೆ 2.24 ಟನ್ನಿಂದ 1.42 ಟನ್ಗೆ ಅಂದರೆ ಶೇ.37ರಷ್ಟು ತೀವ್ರ ಕುಸಿತ ಕಂಡಿದೆ ಎಂದು ಕೃಷಿ ಸಚಿವ ರಾಮನಾಥ್ ಠಾಕೂರ್ ತಿಳಿಸಿದ್ದಾರೆ.
ಎಲೆ ಚುಕ್ಕೆ ರೋಗ, ಹಣ್ಣಿನ ಕೊಳೆತ ರೋಗ ಮತ್ತು ಬೇರು ಗ್ರಬ್ ಬಾಧೆಯಂತಹ ಸಮಸ್ಯೆಗಳಿಂದಾಗಿ ಇಳುವರಿ ಕಡಿಮೆಯಾಗಿದ್ದು, ಸರ್ಕಾರವು ರೋಗ ಪೀಡಿತ 10 ತಾಲ್ಲೂಕುಗಳಲ್ಲಿ ನಿರ್ವಹಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.