
ನಿರ್ಮಾ ಕಂಪನಿಯ ಸಂಸ್ಥಾಪಕ ಕರ್ಸನ್ ಭಾಯ್ ಪಟೇಲ್ ಅವರು 1969ರಲ್ಲಿ ತಮ್ಮ ಮನೆಯಲ್ಲಿ ಡಿಟರ್ಜೆಂಟ್ ತಯಾರಿಸಿ, ಮೂರು ವರ್ಷಗಳ ಕಾಲ ಸೈಕಲ್ನಲ್ಲಿ ಮನೆ ಮನೆಗೆ ಮಾರಾಟ ಮಾಡಿದ್ದರು.
ತಮ್ಮ ದಿವಂಗತ ಮಗಳು ನಿರುಪಮಾ ಅವರ ಹೆಸರನ್ನು ಬ್ರ್ಯಾಂಡ್ಗೆ ಇಟ್ಟಿದ್ದ ಪಟೇಲ್, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಮೂಲಕ ಯಶಸ್ಸು ಗಳಿಸಿದರು.
ಒಬ್ಬ ವ್ಯಕ್ತಿಯಿಂದ ಪ್ರಾರಂಭವಾದ ನಿರ್ಮಾ ಗ್ರೂಪ್ ಇಂದು ಸೋಪ್, ರಾಸಾಯನಿಕಗಳು ಮತ್ತು ಸಿಮೆಂಟ್ ವಲಯದಲ್ಲಿ ವಿಸ್ತರಿಸಿದ್ದು, ಕಂಪನಿಯ ವಹಿವಾಟು ಅಂದಾಜು ₹75,000 ಕೋಟಿಗೂ ಹೆಚ್ಚಾಗಿದೆ.