
ಬಾಂಗ್ಲಾದೇಶದ ಯುವಜನರ ಪ್ರತಿಭಟನೆ ಹಾಗೂ ಸರ್ಕಾರ ಪತನದ ಹೋರಾಟವೇ ಭಾರತದ ಯುವಕರಿಗೆ ಸ್ಫೂರ್ತಿ ಎಂದು ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಹೇಳಿದ್ದಾರೆ.
ವಕೀಲ ಪ್ರಶಾಂತ್ ಭೂಷಣ್ ಸರ್ಕಾರದ ಆಡಳಿತ ಬದಲಾವಣೆ ಹಾಗೂ ಪ್ರತಿಭಟಿಸುವ ಹಕ್ಕನ್ನು ಸಮರ್ಥಿಸಿ ಈ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದು ಭಾರತದಲ್ಲಿ ಕ್ಷಿಪ್ರಕ್ರಾಂತಿ ಹಾಗೂ ಅರಾಜಕತೆ ಸೃಷ್ಟಿಸುವ ವಿಪಕ್ಷಗಳ ಸಂಚು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ವಾಗ್ದಾಳಿ ನಡೆಸಿದ್ದಾರೆ.